ನಿಬ್ಬೆರಗಿನ ನಿವಾಸಿಗಳು !!

ಇಂದಿನ ನಮ್ಮ ಮನೆಗಳಿಗೆ ಡೋರ್ ಲಾಕ್‌ಗಳನ್ನೂ ಹಾಕಿ ಮುಟ್ಟಿ ನೋಡಿ ಹೊರ
ಹೋಗುತ್ತೇವೆ. ಮುಂದೊಂದು ದಿನ ಈ ಕೀಲಿ ಜಡಿಯುವ ಸಮಸ್ಯೆಗಳೇ ಇರುವುದಿಲ್ಲವೆಂದು
ವಿಜ್ಞಾನಿಗಳು ಹೇಳುತ್ತಾರೆ. ಮನೆಯ ಯಜಮಾನ ಮನೆಯ ಬಾಗಿಲ ಬಳಿ ಬಂದಾಗ
ಸೆನ್ಸಾರ್‌ಗಳಿಂದ ಮುಖವನ್ನು ಅಥವಾ ಕಣ್ಣಿನ ಐರಸ್ ಅನ್ನು ಪರೀಕ್ಷೆ ಮಾಡಿ ಗುರ್ತನ್ನು
ಖಚಿತಗೊಳಿಸಿಕೊಂಡು ಸ್ವಯಂ ಚಾಲಿತವಾಗಿ ಬಾಗಿಲುಗಳು ತಮ್ಮಿಂದ ತಾವೇ
ತೆರೆದುಕೊಳ್ಳುತ್ತವೆ. ಈ ತಂತ್ರಜ್ಞಾನ ಮುಂದೊಂದು ದಿನ ಬರಲಿದೆ, ಎಂದು ವಿಜ್ಞಾನಿಗಳ
ವ್ಯಾಖ್ಯಾನವಾಗಿದೆ. ಇದರಂತೆ ಆಹಾರ ಪದಾರ್ಥಗಳ ಅವಶ್ಯಕತೆಯನ್ನು”ರೆಫ್ರಿಜಿರೇಟರ್’ಗಳು
ಗುರುತಿಸುತ್ತವೆ. ಭವಿಷ್ಯದಲ್ಲಿ ತಂಗಳು ಪೆಟ್ಟಿಗೆಯಲ್ಲಿ ತರಕಾರಿ ಮುಗಿದು ಹೋದಾಗ ಆದು
ತನ್ನಿಂದ ತಾನೆ ಸ್ವಯಂಚಾಲಿತಗೊಂಡು ತರಕಾರಿ ಮಾರ್ಕೆಟ್ಟಿಗೆ ಸಂದೇಶವನ್ನು ರವಾನಿಸುತ್ತವೆ.
ಮೈಕ್ರೋ ಓವನ್ ಆಹಾರ ಪದಾರ್ಥಗಳ ತಯಾರಿಕೆಯನ್ನು ಪರಿಶೀಲಿಸುತ್ತದೆ.
ವಾಷಿಂಗ್‌ಮಿಷನ್ ಕೂಡ ತನಗೆ ಬೇಕಾದ ಡಿಟರ್ಜಂಟ್ ಫಾಬ್ರಿಕ್ ಸಾಫ್ಟ್‌ನರ್‌ಗಳನ್ನೂ
ಅಂಗಡಿಯಿಂದ ತರಿಸಿಕೊಳ್ಳುವ ಏರ್ಪಾಡು ಮಾಡುತ್ತದೆ.

ಮನೆಯ ಕಿಟಕಿಗಳಲ್ಲಿಯೂ ಕೂಡ ಕ್ರಾಂತಿಕಾರಕ ಬದಲಾವಣೆಯಾಗುತ್ತದೆ.
‘ಸಾಸ್ಮಾರ್ಟ್‌ಗ್ಲಾಸ್’ ಎಂಬ ತಿರುಗುವ ರೆಕ್ಕೆಗಳು ಆಕ್ಟಿವ್ ಎಲಿಮೆಂಟ್ಸ್ ಆಗಿ
ಕಾರ್ಯನಿರ್ವಹಿಸುತ್ತವೆ. ಅಂದರೆ ಸೂರ್ಯ ಕಿರಣಗಳ ಉಷ್ಟತೆ ಮತ್ತು ಬೆಳಕಿನ ತೀವ್ರತೆಗೆ
ತಕ್ಕಂತೆ ಸ್ವಯಂ ಚಾಲನೆಗೊಂಡು ನಮಗೆ ಅಗತ್ಯವಿದ್ದಷ್ಟು ಸೂರ್ಯರಶ್ಮಿಗಳನ್ನು ಒಳಗೆ
ಬರುವಂತೆ ಏರ್ಪಾಡು ಇರುತ್ತದೆ. ಹಾಗೆಯೇ ರಾತ್ರಿ ಸಮಯದಲ್ಲಿ ನಮ್ಮ ಏಕಾಂತಕ್ಕೆ
ಭಂಗವಾಗದಂತೆ ಕಿಟಕಿಗಳೆ ಹೊಂದಾಣಿಕೆಯಾಗುತ್ತವೆ. ಹೊರಗಿನಿಂದ ನೋಡಿದರೆ ಕಿಟಕಿಗಳು
ಗಾತ್ರದಲ್ಲಿ ಚಿಕ್ಕವು ಎನಿಸಿದರೂ ಮನೆಯೊಳಗಿಂದ ನೋಡಿದರೆ ಅವು ಎರಡು ಪಟ್ಟು ದೊಡ್ದ
ಟಿ.ವಿ.ಯ ಚಪ್ಪಟೆ ಸ್ಕ್ರೀನಿನಂತೆ ಕಾಣಿಸುತ್ತವೆ. ಮುಂದೊಂದು ದಿನ ಮನೆಯೊಳಗೆ ನಿಮ್ಮ ಸ್ವಂತ
ಸ್ಯಾಟ್ ಲೈಟ್ ಲಿಂಕ್, ನಿಮ್ಮ ಮನರಂಜನೆ, ವಿಜ್ಞಾನ ಹಾಗೂ ಸುದ್ದಿ ಸಮಾಚಾರವನ್ನು
ಸಾದರಪಡಿಸುತ್ತದೆ. ಈಗ ಆಗಿರುವ ಫೈಬರ್ ಆಪ್ಟಿಕಲ್ ಕೇಬಲ್ ಸಂಪರ್ಕಗಳಿಗೆ ಮುಂದೆ
ಮೌಲ್ಯವಿರಲಾರದು. 2020 ಸುಮಾರಿಗೆ ಟಿ.ವಿ. ಯೂ ಸಹ ಹಳೆಯ ಸರಕಾಗಬಹುದು.
ಸೋಫಾದಲ್ಲಿ ಆರಾಮಾಗಿ ಮಲಗಿಕೊಂಡು ನಿಮ್ಮ ನೆಚ್ಚಿನ ತಾರೆಗಳ ಕಾರ್ಯಕ್ರಮಗಳನ್ನು 3D
ಹಲೋಗ್ರಾಂಮ್ ತಾಂತ್ರಿಕತೆಯ ಮೂಲಕ ವೀಕ್ಷಿಸಬಹುದು.

೦೦೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿ ಹೋಗಲೆ, ಹೇಗೆ ಕಾಣಲೆ?
Next post ನಾಟಿ ಕಲ್ಲನು ದಾಟಿ ಇಳಿದು ಬಾ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys